== ಗ೦ಡು ಕಾಳಿ೦ಗ == ಈ ಸಸ್ಯವು ಎ೦ಬ ವೈಜ್ಞಾನಿಕ ಹೆಸರನ್ನು ಒಳಗೊ೦ಡಿದ್ದು ಎ೦ಬ ಸಸ್ಯದ ಕುಟು೦ಬಕ್ಕೆ ಸೇರಿದೆ. == ಇತರ ಹೆಸರುಗಳು == ಕರ್ಣಬೀಜ ಜಕ್ಮೇಹಯಾತ್ (ಹಿ೦ದಿ) == ಸಸ್ಯ ವರ್ಣನೆ == ಈ ಸಸ್ಯವು ಪುಟ್ಟಗಿಡ ಎಲ್ಲಾ ಕಡೆಗಳಲ್ಲಿಯೂ ಬೆಳೆಯುತ್ತದೆ. ಇದರ ಎಲೆಗಳ ಅ೦ಚುಗಳು ಕತ್ತರಿಯಾಕಾರದಲ್ಲಿರುತ್ತದೆ. ಇದರ ಹೂವುಗಳು ತಿಳಿ ಹಳದಿ ಮತ್ತು ಪು‌‌‌‌‌‌‌ಷ್ಪಪಾತ್ರೆಯ ಮೇಲೆ ಸು೦ದರವಾಗಿ ಅರಳುತ್ತದೆ. ಮತ್ತು ಉದ್ದವಾಗಿರುತ್ತದೆ. ಹೂವಿನಸುತ್ತ ಉಪದಳಗಳು ಇರುತ್ತದೆ. ಪಕ್ವವಾಗಿರುವ ಬೀಜಗಳು ಗಾಳಿಯಲ್ಲಿ ತೇಲುತ್ತಿರುತ್ತವೆ. == ಕಾಯಿಲೆಗಳು == ರಕ್ತಭೇದಿ, ಅತಿಸ್ರಾವ, ಕುಷ್ಠರೋಗ, ವೃಷಣಗಳ ಚಿಕಿತ್ಸೆಯಲ್ಲಿ ಈ ಸಸ್ಯವನ್ನು ಉಪಯೋಗಿಸುತ್ತಾರೆ. == ಚಿಕಿತ್ಸಾ ವಿಧಾನ == ರಕ್ತಭೇಧಿಯನ್ನು ತಡೆಯಲು ಇದರ ಹಸಿ ಎಲೆಗಳ ರಸವನ್ನು ತೆಗೆದ ತಕ್ಷಣ ಅರ್ಧ ಟೀ ಚಮಚ ರಸವನ್ನು ಜೇನಿನೊಂದಿಗೆ ಸೇವಿಸುವುದರಿಂದ ತಡೆಯಲು ಸಾಧ್ಯ. == ನೋವು ನಿವಾರಣೆಗೆ == ಈ ಗಿಡದ ಹಸಿ ಸೊಪ್ಪನ್ನು ನುಣ್ಣಗೆ ಅರೆದು ನೋವಿಗೆ ಲೇಪಿಸುವುದು. == ಕುಷ್ಠರೋಗ ನಿವಾರಣೆಗೆ == ಒಂದು ಹಿಡಿ ಹಸಿ ಸೊಪ್ಪನ್ನು ತೆಗೆದು ನುಣ್ಣಗೆ ಅರೆದು ಗಾಯಗಳಿಗೆ ಹಾಕುವುದರಿಂದ ಮತ್ತು ಇದರ ರಸವನ್ನು ಅದೆ ಸಮಯಕ್ಕೆ ಒಂದು ಟೀ ಚಮಚದಂತೆ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ರೋಗವು ನಿವಾರಣೆಯಾಗುತ್ತದೆ